Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬ್ಯಾಚುಲರ್ ಗಳ ಪಾರ್ಟಿ ಮೂಡ್ --ರೇಟಿಂಗ್ : 3.5/5 ****
Posted date: 27 Sat, Jan 2024 10:21:32 PM
ಬ್ಯಾಚುಲರ್ ಪಾರ್ಟಿ ಹೆಸರು ಕೇಳಿದ ಕೂಡಲೇ ನಮಗೆಲ್ಲ ನೆನಪಾಗೋದು ದಶಕದ ಹಿಂದೆ ತೆರೆಕಂಡಿದ್ದ ಕಿರಿಕ್ ಪಾರ್ಟಿ ಚಿತ್ರ. ಆದರೆ  ಆ  ಸಿನಿಮಾಗೂ  ಈ  ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು  ಚಿತ್ರತಂಡ ಮೊದಲೇ ಸ್ಪಷ್ಟನೆ ನೀಡಿತ್ತು.  ಬ್ಯಾಚುಲರ್ ಪಾರ್ಟಿ ಚಿತ್ರವನ್ನು ಎಂಟರ್‌ಟೈನ್ಮೆಂಟ್ ಜೊತೆ ನಗುವಿನ ಪಯಣ ಅನ್ನಬಹುದು. ನಾಯಕ ದಿಗಂತ್ ಪಾತ್ರದಿಂದಲೇ  ಚಿತ್ರದ  ಆರಂಭವಾಗುತ್ತದೆ, ಆತನ ಹೆಸರು ಸಂತೋಷ್,  ಒಬ್ಬ ಸಾಫ್ಟ್ ವೇರ್ ಇಂಜಿನಿಯರ್. ಸಂತೋಷ್ ಪತ್ನಿಯಾಗಿ ಸಿರಿ ರವಿಕುಮಾರ್ ನಟಿಸಿದ್ದಾರೆ. ಆದರೆ ಅವರಿಬ್ಬರ ವೈವಾಹಿಕ ಬದುಕು ಅಷ್ಟು  ಚೆನ್ನಾಗಿರಲ್ಲ. ಸಂತೋಷನ ವೃತ್ತಿಬದುಕು ಹಾಗೂ ವೈಯಕ್ತಿಕ ಬದುಕು ಎರಡೂ  ದಾರಿ ತಪ್ಪಿರುತ್ತದೆ, ಅಲ್ಲದೆ  ಇಎಂಐ ಕಂತು  ಸೇರಿದಂತೆ  ಮಾಡಿಕೊಂಡ ಕಮಿಟ್‌ಮೆಂಟ್‌ ಗಳೆಲ್ಲ ಕುತ್ತಿಗೆಗೆ ಬಂದಾಗ ಬೇಸತ್ತು ಜೀವನವೇ ಸಾಕೆನಿಸಿರುತ್ತದೆ. ಆತನಿಗೂ ಒಂದೊಳ್ಳೆ ಜೀವನ ಸಾಗಿಸಬೇಕೆನ್ನುವ ಆಸೆಯಿರುತ್ತದೆ, ಹೀಗೊಮ್ಮೆ ಗೆಳೆಯನ ಜೊತೆ  ಬ್ಯಾಚುಲರ್ ಪಾರ್ಟಿಗೆಂದು ಹೋಗಿರುತ್ತಾನೆ, ಆ ಪಾರ್ಟಿ ಮುಗಿಯೋ ಹೊತ್ತಿಗೆ ಅವರೆಲ್ಲ ಬ್ಯಾಂಕಾಕ್‌ನಲ್ಲಿರುತ್ತಾರೆ. ಅವರೇಕ  ಬ್ಯಾಂಕಾಕ್‌ಗೆ ಹೋದರು, ಅಲ್ಲಿ ಏನೇನಾಯ್ತು ಅನ್ನೋದೇ  ಚಿತ್ರದ ಮುಖ್ಯಕಥೆ.

ಚಿತ್ರದಲ್ಲಿ ಲೂಸ್‌ಮಾದ ಯೋಗಿ ಬ್ಯಾಚುಲರ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇನ್ನ ದಿಗಂತ್ ಜೀವನದಲ್ಲಿ ಯೋಗಿ ಬಂದಾಗಲೆಲ್ಲಾ ಏನಾದರೂ ಯಡವಟ್ಟಾಗುತ್ತಲೇ ಇರುತ್ತದೆ. ಅಚ್ಯುತ್‌ಕುಮಾರ್ ದೈಹಿಕ ಶಿಕ್ಷಕಕನಾಗಿ ಕಾಣಿಸಿಕೊಂಡಿದ್ದಾರೆ. ಈ ಮೂವರೂ ಬ್ಯಾಚುಲರ್ ಪಾರ್ಟಿ ಮಾಡಿ ಬ್ಯಾಂಕಾಕ್‌ಗೆ ಹೋದಾಗ ಅಲ್ಲಿ ಇವರ ಪರಿಸ್ಥಿತಿ ಏನಾಯ್ತು ಎಂಬುದನ್ನು ಹಾಸ್ಯಮಯ ಸನ್ನಿವೇಶಗಳೊಂದಿಗೆ ನಿರ್ದೇಶಕ ಅಭಿಜಿತ್ ಮಹೇಶ್ ವಿವರಿಸಿದ್ದಾರೆ. ಲೂಸ್‌ಮಾದ ಯೋಗಿ ತಮ್ಮ ಅಭಿನಯದ  ಮೂಲಕ.  ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಹಾಸ್ಯದ ಸನ್ನಿವೇಶಗಳಲ್ಲಿ  ಸಖತ್ ನಗಿಸುತ್ತಾರೆ. ಯೋಗಿಯನ್ನು ಕಾಮಿಡಿಯಾಗಿ ನೋಡಬೇಕೆನ್ನುವವರಿಗೆ ಈ ಸಿನಿಮಾ ಇಷ್ಟವಾಗುತ್ತೆ. ಜೀವನದಲ್ಲಿ ನೊಂದ ವ್ಯಕ್ತಿಯಾಗಿ ದಿಗಂತ್ ವೀಕ್ಷಕರ ಅನುಕಂಪಕ್ಕೆ  ಪಾತ್ರರಾಗುತ್ತಾರೆ. ಇನ್ನು ದೈಹಿಕ ಶಿಕ್ಷಕನಾಗಿ  ಅಚ್ಯುತ್‌ಕುಮಾರ್ ಸಹಜ ನಟನೆಯಿಂದಲೇ  ಗಮನ ಸೆಳೆದಿದ್ದಾರೆ. ದಿಗಂತ್ ಪತ್ನಿಯಾಗಿ ಸಿರಿ ರವಿಕುಮಾರ್ ಕೂಡ ಇಷ್ಟವಾಗುತ್ತಾರೆ.  ಬ್ಯಾಚುಲರ್  ಪಾರ್ಟಿ ಸಾಧಾರಣ ಕಥೆ ಹೊಂದಿದ್ದರೂ  ಕೆಲವು ಹಾಸ್ಯ ಸನ್ನಿವೇಶಗಳು ಮತ್ತು ಬ್ಯಾಂಕಾಕ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ. ನಿರ್ದೇಶಕ ಅಭಿಜಿತ್ ಮಹೇಶ್ ಮೊದಲ ಸಿನಿಮಾದದಲ್ಲೇ  ಪ್ರೇಕ್ಷಕರನ್ನು ನಗಿಸಲು ಪ್ರಯತ್ನಿಸಿದ್ದಾರೆ, ಚಿತ್ರಕಥೆಯ ಕಡೆ ಮತ್ತಷ್ಟು ಗಮನ ಹರಿಸಬಹುದಿತ್ತು. ದಿಗಂತ್, ಲೂಸ್‌ಮಾದ ಯೋಗಿ, ಅಚ್ಯುತ್‌ಕುಮಾರ್ ಕಾಂಬಿನೇಷನ್ ನೋಡುಗರಿಗೆ ಇಷ್ಟವಾಗುತ್ತದೆ. ಯೋಗಿ ಪ್ರೇಕ್ಷಕರ ಮೆಚ್ಚುಗೆ  ಪಡೆಯುತ್ತಾರೆ.  ಯೋಗಿ ಜೊತೆ ಪ್ರಕಾಶ್ ತುಮ್ಮಿನಾಡು ಕೂಡ ಹಾಸ್ಯ ಸನ್ನಿವೇಶಗಳಿಂದ ಗಮನ ಸೆಳೆಯುತ್ತಾರೆ. ಇನ್ನು  ಮೇಕಿಂಗ್‌ವೈಸ್ ಸಿನಿಮಾ ಶ್ರೀಮಂತವಾಗಿ ಬಂದಿದೆ. ಕಾಮಿಡಿ ಜೊತೆಗೆ ಕೆಲ ಎಮೋಷನಲ್ ಸೀನ್‌ಗಳಿದ್ದರೂ, ಅಷ್ಟಾಗಿ  ಪರಿಣಾಮ ಬೀರಲ್ಲ.   ವಿಜಯ್‌ಪ್ರಕಾಶ್ ಅವರ ಕಂಠದಲ್ಲಿ ಮೂಡಿಬಂದಿರುವ   ಹಾಡೊಂದು  ಚೆನ್ನಾಗಿ ಬಂದಿದೆ. ವೀಕೆಂಡ್‌ನಲ್ಲಿ  ಎಂಜಾಯ್ ಮಾಡಲು ಬ್ಯಾಚುಲರ್ ಪಾರ್ಟಿ ಉತ್ತಮ ಆಯ್ಕೆ ಎನ್ನಬಹುದು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬ್ಯಾಚುಲರ್ ಗಳ ಪಾರ್ಟಿ ಮೂಡ್ --ರೇಟಿಂಗ್ : 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.